ಚಿಕ್ಕಮಗಳೂರು ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಒಂದು ನಗರ. ಇದು ಮುಳ್ಳಯ್ಯನ ಗಿರಿಯ ಬುಡದಲ್ಲಿ ಇದೆ. ಚಿಕ್ಕಮಗಳೂರು ಹಸಿರು ಕಾಡುಗಳಿಗೆ, ಎತ್ತರದ ಪರ್ವತಗಳಿಗೆ ಮತ್ತು ಸುಂದರ ಪರಿಸರಕ್ಕೆ ಪ್ರಸಿದ್ದವಾಗಿದೆ. ಚಿಕ್ಕಮಗಳೂರು ಕಾಫಿಗೂ ಸಹ ಪ್ರಸಿದ್ದವಾಗಿದೆ, ಇದು ಕರ್ನಾಟಕದ ಕಾಫಿ ನಗರ ಎಂದು ಸಹ ಕರೆಯಲ್ಪಡುತ್ತದೆ. ರಾಷ್ಟ್ರೀಯ ಹೆದ್ದಾರಿ ೧೭೩ ಈ ನಗರದ ಒಳಗೆ ಹಾದು ಹೋಗುತ್ತದೆ. == ಉಲ್ಲೇಖಗಳು ==